ನಮ್ಮ ಬಗ್ಗೆ

‘ವೈದ್ಯಲೋಕ’ ನಿಯತಕಾಲಿಕ, ಬೆಂಗಳೂರಿನಲ್ಲಿ ನೆಲೆಯೂರಿರುವ ‘ಮೀಡಿಯಾ ಐಕಾನ್’ ಸಮೂಹ/ಬಳಗದ ಒಂದು ಪ್ರಕಟಣೆ. ಈ ನಿಯತಕಾಲಿಕವನ್ನು, ಆರೋಗ್ಯ, ಸ್ವಾಸ್ಥ್ಯ, ಯೋಗ ಹಾಗೂ ಸಂಬಂಧಿತ ವಿಚಾರಗಳ ಕುರಿತು ಜನಜಾಗೃತಿಯನ್ನು ಮೂಡಿಸುವ ಏಕೈಕ ಸಂಕಲ್ಪದೊಂದಿಗೆ ಸ್ಥಾಪಿಸಲಾಗಿದೆ.

ಮೀಡಿಯಾ ಐಕಾನ್’ ಸಮೂಹವು 2003ರಿಂದ `ವೈದ್ಯಲೋಕ’ ಕನ್ನಡ ನಿಯತಕಾಲಿಕವನ್ನು ಹೊರತರುತ್ತಿದೆ. 2010ರಲ್ಲಿ ಪ್ರಾರಂಭವಾದ ‘ಆಯುರ್ ಫಾರ್ಮ ಹೆಲ್ತ್ ಮ್ಯಾಗಜಿನ್’ ಹೆಸರಿನ ಇಂಗ್ಲಿಷ್ ನಿಯತಕಾಲಿಕವನ್ನು 2013ರಲ್ಲಿ ‘ಹೆಲ್ತ್ ವಿಷನ್’ ಹೆಸರಿನಲ್ಲಿ ಪುನಃ ಪ್ರಾರಂಭಿಸಲಾಗಿದ್ದು ತದನಂತರ ಅದು ಯಶಸ್ವಿಯಾಗಿ ಓದುಗರನ್ನು ತಲುಪುತ್ತಾ ಬಂದಿದೆ.

ಓದುಗರಿಗೆ ಸುಲಭವಾಗಿ ಲಭಿಸುವಂತೆ ಮಾಡಲು ಹಾಗೂ ಮುದ್ರಿತ ಪ್ರತಿಗಳು ಸಿಗುವುದು ಅಶಕ್ಯವೆನಿಸಿದ ವಿಶ್ವದ ನಾನಾ ಭಾಗದ ಓದುಗರನ್ನು ತಲುಪಲು, ಈಗ ಇವೆರಡೂ ನಿಯತಕಾಲಿಕಗಳನ್ನು ಇ-ವೇದಿಕೆ/ಪ್ಲಾಟ್‍ಫಾರಂ( ಆನ್‍ಲೈನ್)ನಲ್ಲಿ ದೊರೆಯುವಂತೆ ಮಾಡಲಾಗಿದೆ.

ಈ ಇ-ಮ್ಯಾಗಜಿನ್‍ಗಳು ಕೈಗೆಟಕುವ ಚಂದಾದರ ಪ್ಲಾನ್‍ಗಳಲ್ಲಿ ಲಭ್ಯ. ನೀವು ಪಾವತಿಸುವ ಚಂದಾ ದರವು ಕಾಲಕ್ರಮೇಣ ನಮ್ಮ ಸಂಸ್ಥೆಯು ಆರ್ಥಿಕವಾಗಿ ಸಚೇತನಗೊಳ್ಳುವಂತೆ ಮಾಡುವುದಲ್ಲದೆ ನಮ್ಮ ಘನ ಸಂಕಲ್ಪವನ್ನು ಸಾಕಾರಗೊಳಿಸಲು ನೆರವಾಗುವುದು.

ಇಲ್ಲಿ ಪ್ರಕಟವಾಗಿರುವ ಮಾಹಿತಿ ಕೇವಲ ಆಕರ/ಅವಲೋಕನ (ರೆಫೆರೆನ್ಸ್)ಕ್ಕಾಗಿ ಮಾತ್ರ ಆಗಿರುವುದರಿಂದ ದಯವಿಟ್ಟು ನಿಮ್ಮ ವೈದ್ಯರ ಸಲಹೆಯನ್ನು ಪಡೆಯಿರಿ. ಇಲ್ಲಿ ಪ್ರಕಟವಾಗಿರುವ ಲೇಖನ ಹಾಗೂ ಜಾಹೀರಾತುಗಳನ್ನು ಪ್ರಕಾಶಕರು ಅನುಮೋದಿಸುತ್ತಾರೆ ಎಂದು ಅರ್ಥವಲ್ಲ.

ಈ ಇ-ಮ್ಯಾಗಜಿನ್‍ಗಳನ್ನು ಧ್ಯೇಯ ಮೀಡಿಯಾ ಪ್ರೈ. ಲಿ. ಅಭಿವೃದ್ಧಿಪಡಿಸಿದ್ದು ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ ಹಾಗೂ ವಿನ್ಯಾಸವು ಎಲ್ಲಾ ಗ್ಯಾಜೆಟ್ ಗಳಿಗೆ ಹೊಂದುವಂತೆ, ಹೆಚ್ಚಿನ ರೆಸಲ್ಯೂಶನ್ ಹಾಗೂ ವೈವಿಧ್ಯಮಯ ಫೀಚರ್‍ಗಳನ್ನು ನೀಡಲಾಗಿದೆ.

ನೀವು ಚಂದಾದಾರರಾದ ದಿನಾಂಕಕ್ಕಿಂತ ಹಿಂದಿನ 6 ತಿಂಗಳಿನಷ್ಟು ಸಂಚಿಕೆಗಳನ್ನು ಇ-ಪ್ಲಾಟ್‍ಫಾರಂ ನಿಮಗೆ ಉಚಿತವಾಗಿ ನೀಡುತ್ತದೆ.