ಆತ್ಮೀಯ ಓದುಗರೇ,

ಆರೋಗ್ಯಕ್ಕೆ ಮುಡಿಪಾಗಿರುವ ನಮ್ಮ ಇ- ಮ್ಯಾಗಜಿನ್ ಗೆ ನೀವು ಚಂದಾದಾರರಾಗಿರುವುದಕ್ಕೆ ಧನ್ಯವಾದಗಳು. ಒಂದು ಹೆಮ್ಮಾರಿಯು ಇಂದು ವಿಶ್ವದಾದ್ಯಂತ ಆರ್ಥಿಕತೆ ಹಾಗೂ ಜನಜೀವನವನ್ನು ಹಿಂಡಿ ಹಿಪ್ಪೆ ಮಾಡಿದೆ ಮತ್ತು ಆರೋಗ್ಯದಂತಹಾ ಗಂಭಿರ ವಿಷಯವನ್ನು ಕಡೆಗಣಿಸದೇ ಇದ್ದಿದ್ದಲ್ಲಿ, ಮನುಕುಲವು ಇಂದು ಈ ವಿಷಮ ಪರಿಸ್ಥಿತಿಯನ್ನು ತಲುಪುತ್ತಿರಲಿಲ್ಲ ಎಂಬುದು ನಿಮಗೆ ತಿಳಿದಿದೆ. ವೈದ್ಯ ಬಳಗ ಹಾಗೂ ಜನಸಾಮಾನ್ಯ ಈ ಎರಡೂ ವರ್ಗಗಳ ಮೆಚ್ಚುಗೆಗೆ ಪಾತ್ರವಾಗಿರುವ ಮತ್ತು ಮುದ್ರಣ ರೂಪದಲ್ಲಿ ಈಗಾಗಲೇ ಪ್ರಸಾರವಾಗುತ್ತಿರುವ ನಮ್ಮ ‘ವೈದ್ಯಲೋಕ’ಕ್ಕೆ ಚಂದಾದಾರರಾಗುವ ನಿಮಗೆ; ಆರೋಗ್ಯ ರಕ್ಷೆ, ಸ್ವಾಸ್ಥ್ಯ ದೇಹ ಸೌಷ್ಠವ ಹಾಗೂ ಯೋಗ ಇವುಗಳಲ್ಲದೆ ಆರೋಗ್ಯವನ್ನು ಬಾಧಿಸುವಂತಹ ಕಾಯಿಲೆಗಳು ಮತ್ತು ಏರುಪೇರುಗಳ ನಿವಾರಣೆಯ ಚಿಕಿತ್ಸೆ ಹಾಗೂ ಶುಶ್ರೂಷೆಯ ಕುರಿತು ವಿಫುಲ ಮಾಹಿತಿಯು ಲಭ್ಯವಾಗಲಿದೆ.

ಅಲೋಪಥಿಯಿಂದ ಹಿಡಿದು ಆಯುರ್ವೇದದ ವರೆಗೆ ಶತ:ಸಿದ್ಧವೆನಿಸಿದ ಎಲ್ಲಾ ವೈದ್ಯಕೀಯ ಹಾಗೂ ಆರೋಗ್ಯ ರಕ್ಷೆ ಕ್ಷೇತ್ರಗಳ ನುರಿತ ವಿಶೇಷಜ್ಞರು ಸಲ್ಲಿಸುವ ಲೇಖನ ಇತ್ಯಾದಿಗಳು ‘ವೈದ್ಯಲೋಕ’ದಲ್ಲಿ ಬೆಳಕು ಕಾಣುತ್ತವೆ. ಇವೆಲ್ಲವೂ ನಿಮಗೆ ನಗಣ್ಯವೆನಿಸುವ ಚಂದಾದರದಲ್ಲಿ ದೊರೆಯಲಿದ್ದು ಇವು ನಿಮಗೆ ದೀರ್ಘಕಾಲದಲ್ಲಿ ನಾನಾವಿಧದಲ್ಲಿ ತುಂಬಾ ಉಪಯುಕ್ತವೆನಿಸಲಿವೆ. ಇದೇ ಸಮಯದಲ್ಲಿ, ಒಂದು ಸ್ವಸ್ಥ ರಾಷ್ಟ್ರನಿರ್ಮಾಣದ ಉದಾತ್ತ ಕಾರ್ಯಕ್ಕೆ ಕೊಡುಗೆ ನೀಡಿದ ಸಂತೃಪ್ತಿಯು ನಿಮಗೆ ಪ್ರಾಪ್ತವಾಗುತ್ತದೆ. ‘ವೈದ್ಯಲೋಕ’ವು ನಿಮ್ಮ ಆರೋಗ್ಯಕ್ಕೆ ಒಂದು ಕೈದೀವಿಗೆಯಾಗಿ, ನಿಮ್ಮ ಮುಂಬರುವ ವರುಷಗಳಿಗೆ ಜೀವ ತುಂಬಬಲ್ಲುದು ಎಂದು ಆಶಿಸಲಾಗಿದೆ.

ವೈದ್ಯಲೋಕ ಪತ್ರಿಕೆಯನ್ನು ಪ್ರೋತ್ಸಾಹಿಸಿ
>

Subscriber Registration

Please provide the below information to register as member.